*ಬಿಜೆಪಿಗೆ ಮತ್ತೊಂದು ಶಾಕ್; ಬಾಬುರಾಮ್ ಚಿಂಚನಸೂರ ರಾಜೀನಾಮೆ; ಕೈ ಹಿಡಿಯಲು ಸಿದ್ಧತೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಗೆ ಆಘಾತದ ಮೇಲೆ ಆಘಾತ ಶುರುವಾಗಿದೆ. ಬಿಜೆಪಿಗೆ ಶಾಸಕ ಬಾಬುರಾಮ್ ಚಿಂಚನಸೂರು ರಾಜೀನಾಮೆ ನೀಡಿದ್ದಾರೆ. ಬಾಬುರಾಮ್ ಚಿಂಚನೂರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಇಂದೇ ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಇದರಿಂದ ಹೊಡೆತ ಬೀಳುವ ಸಾಧ್ಯತೆ ದಟ್ಟವಾಗಿದೆ. ಚಿಂಚನಸೂರ ಗುರುಮಿಠಕಲ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಪ್ರಧಾನಿ ಮೋದಿ ಭೇಟಿಗೆ ಅವಕಾಶ ನೀಡದ ಕಾರಣಕ್ಕೆ … Continue reading *ಬಿಜೆಪಿಗೆ ಮತ್ತೊಂದು ಶಾಕ್; ಬಾಬುರಾಮ್ ಚಿಂಚನಸೂರ ರಾಜೀನಾಮೆ; ಕೈ ಹಿಡಿಯಲು ಸಿದ್ಧತೆ*