GIT add 2024-1
Laxmi Tai add
Beereshwara 33

*ಅಕ್ರಮ, ಭ್ರಷ್ಟಾಚಾರಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್: ಸಿಎಂ ಬೊಮ್ಮಾಯಿ ಆಕ್ರೋಶ*

ಅವರೂ ಕೂಡ ಅಪರಾಧಿಗಳಾಗುವುದಿಲ್ಲವೇ? ಎಂದು ಪ್ರಶ್ನೆ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಕ್ರಮ ಹಾಗೂ ಭ್ರಷ್ಟಾಚಾರಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್ ಎನ್ನುವುದು ಇಡೀ ರಾಷ್ಟ್ರಕ್ಕೆ ತಿಳಿದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹರ್ಷಕಲಾ – ರಾಷ್ಟ್ರೀಯ ಕೈಮಗ್ಗ ಮೇಳ 2023 ನ್ನು ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಮತದಾರರ ಓಲೈಕೆಗೆ ಅಕ್ರಮ ಎಸಗುತ್ತಿರುವ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರು ಬಿಜೆಪಿ ಮುಖಂಡರ ವಿರುದ್ಧ ನಗರದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಎಷ್ಟು ತಳಮಟ್ಟಕ್ಕೆ ಹೋಗಿದೆ ಎನ್ನಲು ಇದು ಉದಾಹರಣೆ. ಯಾರು ಯಾರು ಹೇಳಿಕೆ ಕೊಡುತ್ತಾರೆ, ಅದಕ್ಕೆ ಸ್ಪಷ್ಟೀಕರಣ ಹಾಗೂ ಉತ್ತರವನ್ನೂ ಕೊಡುತ್ತಾರೆ. ಕಾಂಗ್ರೆಸ್ ಪಕ್ಷದವರು ಮಹಿಳೆಯರಿಗೆ ಎರಡು ಸಾವಿರ ರೂ.ಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ. ಉಚಿತ ವಿದ್ಯುತ್ ನೀಡುವುದಾಗಿಯೂ ಘೋಷಿಸಿದ್ದು, ಪ್ರತಿದಿನ ಒಂದೊಂದು ಘೋಷಣೆ ಮಾಡುತ್ತಿದ್ದಾರೆ. ಈ ಮಾನದಂಡ ಹಾಕಿದರೆ ಅವರೂ ಕೂಡ ಅಪರಾಧಿಗಳಾಗುವುದಿಲ್ಲವೇ? ಅವರೂ ಕೂಡ ಮತದಾರರಿಗಡ್ ಆಸೆ, ಆಮಿಷಗಳನ್ನು ನೀಡುತ್ತಿಲ್ಲವೇ? ಎಂದು ಪ್ರಶ್ನಿಸಿದರು.

ಮತದಾರರಿಗೆ ಫೋಟೋವುಳ್ಳ ಕುಕ್ಕರ್: ಸಮಗ್ರ ತನಿಖೆ

Emergency Service

ಕಾಂಗ್ರೆಸ್ ನ ನಾಲ್ಕೈದು ಶಾಸಕರು ಅವರ ಚಿತ್ರವುಳ್ಳ ಕುಕ್ಕರ್ ಮತದಾರರಿಗೆ ಕೊಟ್ಟಿರುವುದು ಸಾಕ್ಷಿ ಸಮೇತ ದೊರೆತಿದೆ. ಕುಣಿಗಲ್ ನಲ್ಲಿ ಸಿಕ್ಕು ವಾಣಿಜ್ಯ ತೆರಿಗೆ ಇಲಾಖೆಯವರು ಹಿಡಿದು ನಾಲ್ಕು ಜನರಿಗೆ ದಂಡ ವಿಧಿಸಿದ್ದಾರೆ. ಈ ಬಗ್ಗೆ ಸಮಗ್ರವಾಗಿ ಮಾಹಿತಿ ಪಡೆದು ತನಿಖೆ ಮಾಡಿಸುತ್ತೇವೆ
ಅವರ ಎಲೆಯಲ್ಲಿ ಇಷ್ಟೆಲ್ಲಾ ಇಟ್ಟುಕೊಂಡು ಜನರಲ್ಲಿ ಗೊಂದಲ ಉಂಟು ಮಾಡುವಷ್ಟು ತಳಮಟ್ಟಕ್ಕೆ ಇಳಿದಿದ್ದಾರೆ. ಸೋಲುತ್ತೇವೆ ಎನ್ನುವುದು ಅವರಿಗೆ ಗ್ಯಾರಂಟಿ ಆಗಿದೆ. ಹೀಗಾಗಿ ಈ ರೀತಿ ದೂರು ನೀಡುವುದು ಮಾಡುತ್ತಿದ್ದಾರೆ. ಪೊಲೀಸ್ ಹಾಗೂ ಕಾನೂನು ಇದೆ. ಕಾನೂನಿನ ಪ್ರಕಾರ ಕ್ರಮವಾಗಲಿ. ಈ ರೀತಿಯ ನೂರು ದೂರುಗಳನ್ನು ನಾವು ಅವರ ಮೇಲೆ ನೀಡಬಹುದು. ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ. ಜನರಿಗೂ ಗೊತ್ತಿದೆ. ಇವರಿಂಗ ನಾವು ಪಾಠ ಕಲಿಯಬೇಕಿಲ್ಲ. ಅವರು ಏನು ಮಾಡುತ್ತಾರೋ ಮಾಡಲಿ ಎಂದರು.

ಜನತೆ ಕಾಂಗ್ರೆಸ್ ನ್ನು ಮನೆಗೆ ಕಳುಹಿಸಲಿದ್ದಾರೆ
ಸುರ್ಜೆವಾಲ ಅವರು ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿ ಇದು ಬಹಳ ಹಳೆಯದು. ಕಾಂಗ್ರೆಸ್ ಸರ್ಕಾರ ಇದ್ದಾಗ ಶಿಕ್ಷಕರ ನೇಮಕಾತಿ ಯಲ್ಲಿ ಅಕ್ರಮವಾಗಿ ಪರೀಕ್ಷೆಗೆ ಕುಳಿತಿಲ್ಲದವರನ್ನು ಪಾಸ್ ಮಾಡಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಮೊದಲು ಅದಕ್ಕೆ ಉತ್ತರ ನೀಡಲಿ. ಉದ್ಯೋಗ ಏನಾದರೂ ಮಾರಾಟವಾಗಿದ್ದರೆ ಅದು ಕಾಂಗ್ರೆಸ್ ಕಾಲದಲ್ಲಿ. ಆಗಿದೆಯೋ, ಇಲ್ಲವೋ ಎಂದು ತನಿಖೆಯಲ್ಲಿ ತಿಳಿಯಲಿದೆ. ಕಲಬುರಗಿಯಲ್ಲಿ ಪೊಲೀಸ್ ಪೇದೆಯೊಬ್ಬನನ್ನು ಡಿಐಜಿ ಮಾಡಿ ಆತನ ಮೇಲೆ ಎಫ್.ಐ.ಆರ್ ಮಾಡಿ ನಿವೃತ್ತಿ ಮಾಡಿಸಿದರು. ಇದು ಕಾಂಗ್ರೆಸ್ ನೀತಿ. ಉದ್ಯೋಗ ಮಾರಾಟ ಮಾಡುವುದು ಅಪರಾಧಿಗಳು ಸಿಕ್ಕಾಗ ಅವರನ್ನು ಬಿಡುವುದು ಕಾಂಗ್ರೆಸ್ ಮಾಡಿಕೊಂಡು ಬಂದಿದೆ. ಜನತೆಗೂ ಗೊತ್ತಿದೆ, ಅದಕ್ಕೆ ಅವರನ್ನು ಮನೆಗೆ ಕಳಿಸಿದ್ದಾರೆ. ಈ ಬಾರಿಯೂ ಮನೆಗೆ ಕಲಿಸಲಿದ್ದಾರೆ ಎಂದು ತಿಳಿಸಿದರು.

*ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಿಎಂ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್, ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲು*

https://pragati.taskdun.com/election-malpractice-jp-nadda-cm-basavaraj-bommai-naleen-kumar-kateel-ramesh-jarakiholi-complaint-filed-congress/

Bottom Add3
Bottom Ad 2