GIT add 2024-1
Laxmi Tai add
Beereshwara 33

ಜೀವ, ಜೀವನಕ್ಕೆ ಮಾರಕ ತಂಬಾಕು; ವ್ಯಸನಮುಕ್ತರಾಗಲು ಇದೇ ಸುಸಂಧಿ

Anvekar 3
Cancer Hospital 2

ವಿಶ್ವಾಸ ಸೋಹೋನಿ
ಬ್ರಹ್ಮಾಕುಮಾರಿ ಮೀಡಿಯಾ ವಿಂಗ್
9483937106


ಪ್ರತಿವರ್ಷ ಮೇ 31 ರಂದು ವಿಶ್ವ ತಂಬಾಕು ನಿಷೇಧ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಶ್ವಆರೋಗ್ಯಸಂಸ್ಥೆಯ ಸದಸ್ಯ ರಾಷ್ಟ್ರಗಳು 1987 ರಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು ನೋವುಗಳನ್ನು ಸರ್ವರ ಗಮನಕ್ಕೆ ತರಲು ವಿಶ್ವತಂಬಾಕು ನಿಷೇಧ ದಿನ ಆಚರಿಸಬೇಕೆಂದು ತೀರ್ಮಾನಿಸಿತು.

ಅಧಿಸೂಚನೆ ಡಬ್ಲೂಎಚ್ಓ 40.38;1987 ಪ್ರಕಾರ 1988ರ ಏಪ್ರಿಲ್ 7 ರಂದುಧೂಮ್ರಪಾನ ನಿಷೇಧ ದಿನವನ್ನು ಆಚರಿಸಲಾಯಿತು. ತದನಂತರ ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯದ ದೃಷ್ಟಿಯಿಂದ ತಂಬಾಕು ನಿಷೇಧದ ಬಗ್ಗೆ ಚಿಂತನೆಯನ್ನು ಕೈಗೊಂಡಿತು. ಭಾರತದಲ್ಲಿ ಕ್ಯಾನ್ಸರ್‌ ಆರೋಗ್ಯ ಸಂಸ್ಥೆ, ರೆಡ್‌ಕ್ರಾಸ್ ಸಂಸ್ಥೆ, ಸರ್ಕಾರೇತರ ಸಂಸ್ಥೆಗಳಾದ ಬ್ರಹ್ಮಾಕುಮಾರೀಸ್‌ ಮತ್ತು ಇತರ ಸಂಸ್ಥೆಗಳು ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಹಲವು ಕಾರ್ಯಕ್ರಮಗಳನ್ನು ಕೆಲವು ವರ್ಷಗಳಿಂದ ಮಾಡುತ್ತ ಬಂದಿವೆ.

ತಂಬಾಕು ಸೇವನೆಯಿಂದ ಪ್ರತಿವರ್ಷ ವಿಶ್ವದಾದ್ಯಂತ 60 ಲಕ್ಷ ಜನರು ಮರಣ ಹೊಂದುತ್ತಾರೆ.ಭಾರತದಲ್ಲಿ ಪ್ರತಿ ಸೆಕೆಂಡಿಗೆ ಒಬ್ಬ ವ್ಯಕ್ತಿ, ಒಂದು ದಿನಕ್ಕೆ 3750 ಮತ್ತು ವರ್ಷದಲ್ಲಿ 13.5 ಲಕ್ಷ ಜನ ತಂಬಾಕು ವ್ಯಸನದಿಂದ ಸಾವನ್ನುಅಪ್ಪುತ್ತಾರೆ. 90% ಬಾಯಿಯ ಕ್ಯಾನ್ಸರ್‌ ತಂಬಾಕಿನಿಂದ ಬರುತ್ತದೆ. ಧೂಮ್ರಪಾನ ನಿಮ್ಮಆಯುಸ್ಸನ್ನುಒಂದು ದಿನಕ್ಕೆ 11 ನಿಮಿಷ ಕಡಿಮೆ ಮಾಡುತಿದ್ದರೆ, 90% ಶ್ವಾಸಕೋಶದ ಕ್ಯಾನ್ಸರ್‌ ಧೂಮ್ರಪಾನದಿಂದ ಬರುತ್ತದೆ. ಇದರಿಂದ ಪ್ರತಿವರ್ಷ ವಿಶ್ವದಾದ್ಯಂತ 12 ಲಕ್ಷ ಜನ ಸಾಯುತ್ತಾರೆ.

ಭಾರತ ದೇಶದಲ್ಲಿ ಮುಖ್ಯವಾಗಿ ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕದಲ್ಲಿ ತಂಬಾಕು ಬೆಳೆಯಲಾಗುತ್ತದೆ. 300 ಮಿಲಿಯನ್‌ತಂಬಾಕುಆಂಧ್ರದಲ್ಲಿ ಬೆಳೆಯತ್ತಿದ್ದರೆ, ಕರ್ನಾಟಕದಲ್ಲಿಅತಿ ಹೆಚ್ಚು ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಬೆಳೆಯುತ್ತಾರೆ.
ಧೂಮ್ರಪಾನ ಕೆಟ್ಟದ್ದು, ಆದರೆ ಧೂಮ್ರಪಾನಿಗಳು ಕೆಟ್ಟವರಲ್ಲ. 2023ರ ಧ್ಯೇಯವಾಕ್ಯ ‘ನಮಗೆ ಊಟ ಬೇಕು, ತಂಬಾಕುಅಲ್ಲ.’ ತಂಬಾಕು ಅನೇಕ ಕಾಯಿಲೆಗಳ ಮೂಲ. ಗಂಟಲು, ಬಾಯಿ, ಶ್ವಾಸಕೋಶದ ಕ್ಯಾನ್ಸರ್‌ ತಂಬಾಕಿನಿಂದ ಬರುತ್ತದೆ. ಸಿಗರೇಟ್‌ ತಮ್ಮ ಅಕ್ಕಪಕ್ಕದಲ್ಲಿರುವವರಿಗೆ ಹೆಚ್ಚಿನ ಹಾನಿಯನ್ನು ಮಾಡುತ್ತದೆ. ಆದ್ದರಿಂದ ಸರ್ಕಾರ ಮಾನವನ ಭವಿಷ್ಯದ ಬಗ್ಗೆ ಚಿಂತಿಸಿ ತಂಬಾಕು ನಿಷೇಧ ಮಾಡಿದೆ. ಅನೇಕ ಪ್ರಕಾರದ ಜಾಹೀರಾತುಗಳನ್ನು ನೀಡಿ ಮನುಷ್ಯರನ್ನುಎಚ್ಚರಿಸಲು ಪ್ರಯತ್ನಿಸುತ್ತಿದೆ.

ಗುಟಖಾ, ಪಾನ್‌ಪರಾಗ್, ಬೀಡಿ, ಸಿಗರೇಟು ಮುಂತಾದ ಪೊಟ್ಟಣಗಳ ಮೇಲೆ ತಂಬಾಕು ಅರೋಗ್ಯಕ್ಕೆ ಹಾನಿಕಾರಕ ಎಂದು ಪ್ರಕಟಿಸುವುದು ಕಡ್ಡಾಯವೆಂದು ಕಾನೂನು ಮಾಡಿದೆ. ಸಿನೆಮಾ, ನಾಟಕ, ಬಸ್ಸು,ರೈಲು ಮತ್ತು ಸಾಮಾಜಿಕ ಸ್ಥಳಗಳಲ್ಲಿ ಧೂಮ್ರಪಾನವನ್ನುನಿಷೇಧಿಸಿದೆ. ತಂಬಾಕುವಿನ ಅನೇಕ ಘಾತಕಮರಿಗಳೆಂದರೆ -ಬೀಡಿ, ಸಿಗರೇಟ್, ಗುಟಖಾ, ಪಾನ್‌ಪರಾಗ್, ಪಾನ್‌ಮಸಾಲಾ ಮುಂತಾದವು.

ಇತ್ತೀಚಿನ ದಿನಗಳಲ್ಲಿ ಯುವಕರೇ ಹೆಚ್ಚಾಗಿ ತಂಬಾಕು ಇರುವ ವಸ್ತುಗಳನ್ನೇ ಸೇವಿಸುತ್ತಾರೆ. ಅವರಿಗೆ ತಂಬಾಕಿನಿಂದ ಆಗುವ ದುಷ್ಪರಿಣಾಮಗಳನ್ನು ಅರ್ಥಮಾಡಿಸಲು ಈ ದಿನ ವಿಶ್ವದಾದ್ಯಂತ ತಂಬಾಕು ನಿಷೇಧ ದಿನವನ್ನು ಆಚರಿಸಲಾಗುತ್ತದೆ.
ಬ್ರಹ್ಮಾಕುಮಾರಿ ಸಂಸ್ಥೆಯ ಅಂಗಸಂಸ್ಥೆಯಾದಆರೋಗ್ಯ ವಿಭಾಗ ಪ್ರತಿವರ್ಷತಂಬಾಕು ನಿಷೇಧ ದಿನವನ್ನುಆಚರಿಸುತ್ತಾ ಬಂದಿದೆ. ಆದರೆ ಈ ವರ್ಷ ಭಾರತ ಸರ್ಕಾರದ ಜೊತೆಗೆಒಪ್ಪಂದ ಮಾಡಿಕೊಂಡಿರುವುದರಿಂದ, ಜನರಲ್ಲಿ ಜಾಗೃತಿ ಮೂಡಿಸಲು ಸೆಮಿನಾರ್, ಚರ್ಚಾಕೂಟಗಳು, ಶಾಂತಿಯಾತ್ರೆ, ಚಿತ್ರ-ಪ್ರದರ್ಶನ, ಪ್ರತಿಜ್ಞೆ ಮಾಡುವುದು ಮತ್ತು ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ದುಶ್ಚಟದಿಂದ ದೂರವಾಗಲು ನಿಯಮಿತ ವ್ಯಾಯಾಮ, ಸಾತ್ವಿಕ ಆಹಾರ, ಯೋಗದ ಅವಶ್ಯಕತೆ ಇದೆ.

Emergency Service

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸ್ವಯಂ ಪರಮಾತ್ಮನೇ ಕಲಿಸುವ ರಾಜಯೋಗವು ಅತ್ಯಂತ ಸರಳ ಹಾಗೂ ಸಹಜವಾಗಿದೆ. ಇದು ಮಾನವನ ಪ್ರವೃತ್ತಿಗಳನ್ನು ಶುದ್ಧೀಕರಣ ಮಾಡಿ, ಅವನ ವ್ಯವಹಾರ ಮತ್ತು ಆಚಾರಗಳನ್ನು ಸುಧಾರಿಸಿ, ಅವನ ಸಂಸ್ಕಾರಗಳನ್ನು ಸತೋಪ್ರಧಾನ ಮಾಡಿ, ಅವನನ್ನುದೇವತಾ ಸಮಾನ ಮಾಡುತ್ತದೆ. ಯೋಗವೆಂಬ ಈ ವಿಜ್ಞಾನ ಮನುಷ್ಯನ ಉದ್ವೇಗಗಳನ್ನು ನಿಯಂತ್ರಿಸುತ್ತದೆ. ಅವನ ವಿಚಾರಗಳನ್ನು ವ್ಯವಸ್ಥಿತ ಹಾಗೂ ಸರಳಿತಗೊಳಿಸುತ್ತದೆ. ಈ ವಿಜ್ಞಾನದಿಂದ ವ್ಯಕ್ತಿಯ ಮಾನಸಿಕ ಏಕಾಗ್ರತೆಯಶಕ್ತಿಯು ಹೆಚ್ಚುತ್ತದೆ. ಅವನಿಗೆ ಒಂದು ರೀತಿಯ ಶಾಶ್ವತ ಶಾಂತತೆಯ ಅನುಭವ ಆಗುತ್ತಿರುತ್ತದೆ. ಪರಮಾತ್ಮನ ದಿವ್ಯಗುಣಗಳಾದ ಶಾಂತಿ, ಪವಿತ್ರತೆ, ಆನಂದ, ದಯೆ, ಸುಖ, ಪ್ರೇಮ, ಮುಂತಾದವುಗಳ ಅನುಭವ ಆಗುತ್ತದೆ. ಅವನ ವ್ಯವಹಾರದಲ್ಲಿ ಪರಿವರ್ತನೆ ಬಂದ ಕಾರಣ ಅನ್ಯರ ಜೊತೆಯಲ್ಲಿ ಅವನ ಮನಸ್ತಾಪ, ದ್ವೇಷ, ಈರ್ಷೆ, ಕ್ರೋಧ ಉತ್ಪನ್ನಗೊಳ್ಳುವುದಿಲ್ಲ. ಅವನ ಮನದಲ್ಲಿ ಉದ್ವೇಗಗಳ ಜ್ವಾಲಾಮುಖಿ ಏಳುವುದಿಲ್ಲ. ಮಾನಸಿಕ ಚಿಂತೆ ಇರುವುದಿಲ್ಲ. ಆದರೆ ಏಕರಸ ಅವಸ್ಥೆ ಅಥವಾ ಆನಂದದ ಅವಸ್ಥೆಯಲ್ಲಿ ಸ್ಥಿತನಾಗಿರುತ್ತಾನೆ.

ಮನಸ್ಸನ್ನು ಸದೃಢ ಮಾಡಲು ಈ ರೀತಿ ಚಿಂತನೆ ಮಾಡಿ. ಮನ-ಬುದ್ಧಿಯನ್ನುಏಕಾಗ್ರ ಮಾಡಿ ನಿಮ್ಮ ಶರೀರ ಮತ್ತು ಉಸಿರಾಟದ ಕಡೆ ಗಮನ ಹರಿಸಿ. ಈ ಶರೀರ ಹೇಗೆ ನಿರ್ಮಾಣವಾಗಿದೆ ಎಂದು ಆಲೋಚಿಸಿ. ತಂದೆ ಪರಮಪಿತ ಪರಮಾತ್ಮನು ಈ ಶರೀರದಲ್ಲಿ ಪ್ರತಿಯೊಂದು ಅಂಗಾಂಗವನ್ನು ಬಹಳ ಸುಂದರವಾಗಿ ನಿರ್ಮಿಸಿದ್ದಾನೆ. ಈ ಶರೀರವನ್ನು ನನಗೆ ಅರ್ಪಣೆ ಮಾಡಿದ್ದಾನೆ. ಈ ಶರೀರ ಬಹಳ ಅಮೂಲ್ಯವಾದದ್ದು. ಇಂತಹ ಅಮೂಲ್ಯವಾದ ಶರೀರವನ್ನು ಭಗವಂತ ನನಗೆ ಉಡುಗೊರೆಯನ್ನಾಗಿ ನೀಡಿದ್ದಾನೆ. ಈ ರೀತಿ ಬೇರೆಯಾರೂ ಉಡುಗೊರೆ ನೀಡಲು ಸಾಧ್ಯವಿಲ್ಲ. ಭಗವಂತ ಮಾತ್ರಅದನ್ನು ನೀಡಬಲ್ಲನು. ಈಗ ಪುನಃ ನಿಮ್ಮಆರೋಗ್ಯವಂತ ಶರೀರವನ್ನು ನೋಡಿಕೊಳ್ಳಿ. ವ್ಯಸನಮುಕ್ತರಾಗಿ ಎಲ್ಲಾ ವ್ಯಾಧಿಗಳಿಂದ ಮುಕ್ತವಾಗಿರುವ ಶರೀರವನ್ನೂ ನೋಡಿ.

ಆ ಸಮಯದಲ್ಲಿ ನನ್ನ ಪ್ರತಿಯೊಂದು ಅಂಗಾಂಗವು ಸರಿಯಾದ ರೂಪದಲ್ಲಿ ಕಾರ್ಯ ಮಾಡುತ್ತಿತ್ತು. ಪರಮಾತ್ಮತಂದೆ ಮತ್ತು ಪ್ರಕೃತಿಯ ಸುಂದರ ರಚನೆ ಇದಾಗಿದೆ, ಹೀಗೆ ಮಾತನಾಡುತ್ತಾ ಪರಮಾತ್ಮನಿಗೆ ಧನ್ಯವಾದಗಳನ್ನುಅರ್ಪಿಸುತ್ತಾ ಈ ಶರೀರದ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಿ. ಅನೇಕ ಪ್ರಕಾರದ ಕಾಯಿಲೆಗಳಿಂದ ಮತ್ತು ವ್ಯಸನಗಳಿಂದ ಮುಕ್ತರಾಗುವೆನುಎಂದು ಸಂಕಲ್ಪ ಮಾಡಿರಿ. ಇನ್ನು ಮುಂದೆ ನಾನು ಯಾವುದೇ ವ್ಯಸನಗಳಿಗೆ ನನ್ನಲ್ಲಿ ಸ್ಥಳಾವಕಾಶ ನೀಡುವುದಿಲ್ಲ. ದಿನನಿತ್ಯ ವ್ಯಾಯಾಮ ಹಾಗೂ ಯೋಗಭ್ಯಾಸದಿಂದ ನನ್ನ ಶರೀರ ಹಾಗೂ ಪರಿವಾರದ ಜವಾಬ್ದಾರಿ ಬಗ್ಗೆ ಗಮನ ಇಟ್ಟುಕೊಳ್ಳುವೆನು.
ವ್ಯಸನದಿಂದ ಮುಕ್ತರಾಗಲು ಮನಸ್ಸು ಮಾಡಬೇಕು. ಮನಸ್ಸಿದ್ದರೆ ಮಾರ್ಗಉಂಟು. ಮೇಲ್ಕಾಣಿಸಿದ ಸ್ವಚಿಂತನೆ ಮಾಡಬೇಕು. ಸ್ನೇಹಿತರು, ಪರಿವಾರದ ಸದಸ್ಯರುಧ್ಯೆರ್ಯತಂಬಿ ವ್ಯಸನಮುಕ್ತರಾಗಲು ಸಹಾಯ ಮಾಡಬೇಕು. ಹಾಗಾದರೆ ಬನ್ನಿ ನಾವೆಲ್ಲರೂ ನಮ್ಮಅಕ್ಕಪಕ್ಕದಲ್ಲಿರುವ ವ್ಯಸನಿಗಳಿಗೆ ಹತ್ತಿರದ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯಕ್ಕೆ ಕರೆದುಕೊಂಡು ಬಂದು ರಾಜಯೋಗದಿಂದ ವ್ಯಸನಮುಕ್ತರಾಗಲು ಸಹಾಯ ಮಾಡೋಣ.

https://pragati.taskdun.com/inauguration-of-lakshmidevi-new-temple-from-may-29/


https://pragati.taskdun.com/i-have-instructed-the-authorities-to-ensure-that-water-problem-does-not-arise-mla-shashikala-jolla/

https://pragati.taskdun.com/lakshmi-hebbalkar-is-another-name-for-achievement-chalenge-and-party-loyalty-2/
Bottom Add3
Bottom Ad 2